ಆಲ್ಕೊಹಾಲೊಮೆಟ್ರಿ  
ಆಲ್ಕೊಹಾಲ್ ದ್ರಾವಣಗಳಲ್ಲಿಯೂ ಬಟ್ಟಿ ಇಳಿಸಿ ತಯಾರಿಸಿದ ಮದ್ಯಸಾರದಲ್ಲಿಯೂ ಆಲ್ಕೊಹಾಲ್ ಪ್ರಮಾಣ ಎಷ್ಟಿದೆಯೆಂದು ಅಳತೆ ಮಾಡುವ ವಿಧಾನ : ಉಪಕರಣದ ಹೆಸರು ಆಲ್ಕೊಹಾಲೊಮೀಟರ್. ದ್ರಾವಣಗಳ ಸಾಂದ್ರತೆ ಅಥವಾ ಕಿರಣವಕ್ರೀಭವನಸೂಚ್ಯಂಕ (ರಿಫ್ರೇಕ್ಟೀವ್ ಇಂಡೆಕ್ಸ್) ಇವುಗಳ ಸಹಾಯದಿಂದ ಈ ಪ್ರಮಾಣವನ್ನು ನಿರ್ಧರಿಸಬಹುದು. ಸಾಂದ್ರತೆ-ಪ್ರಮಾಣ ಕೋಷ್ಟಕಗಳಿವೆ. ದ್ರಾವಣದ ಸಾಂದ್ರತೆ ಅಳೆದು ಅದರ ಅನುರೂಪ ಪ್ರಮಾಣವನ್ನು ಇಂಥ ಕೋಷ್ಟಕಗಳನ್ನು ನೋಡಿ ತಿಳಿಯಬಹುದು. 
(ನೋಡಿ- ಆಲ್ಕೊಹಾಲ್-ಪಾನೀಯಗಳು)								
(ವೈ.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ